ಅಲ್ಪಸಂಖ್ಯಾತರ ನಿರ್ದೇಶನಾಲಯ


logo

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಅಲ್ಪಸಂಖ್ಯಾತರ ನಿರ್ದೇಶನಾಲಯ

ಬೆಂಗಳೂರು


Civilization can be judged by the way it treats its Minorities - Education is the most powerful weapon which you can use to change the world - An investment in knowledge pays the best interest - The roots of education are bitter, but the fruit is sweet -
Director

ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯವು ಮತೀಯ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 1999-2000ನೇ ಸಾಲಿನಿಂದ ಕಾರ್ಯನಿರ್ವಹಿಸುತ್ತಿದೆ. ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಹಾಗೂ ಇವರ ಸಂಸ್ಕತಿ ಸಾಹಿತ್ಯವನ್ನು ರಕ್ಷಿಸುವ ಮತ್ತು ಸೌಹಾರ್ದತೆಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ.

ಶ್ರೀ ಅಕ್ರಂ ಪಾಷ, ಭಾ.ಆ.ಸೇ, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು ಇವರನ್ನು ಸಹಕರಿಸಲು ಮತ್ತು ಅಲ್ಪಸಂಖ್ಯಾತರ ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಲು ಒಬ್ಬ ಜಂಟಿ ನಿರ್ದೇಶಕರು, ಇಬ್ಬರು ಉಪ ನಿರ್ದೇಶಕರು ಮತ್ತು ಮೂರು ಸಹಾಯಕ ನಿರ್ದೇಶಕರೊಡನೆ ಹಾಗೂ ಇತರೆ ಕಛೇರಿ ಸಿಬ್ಬಂದಿಗಳು ಒಟ್ಟುಗೂಡಿ ಒಟ್ಟು 63 ಅಧಿಕಾರಿ/ಸಿಬ್ಬಂದಿ ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರಾಜ್ಯದ ಮುವತ್ತೂ ಜಿಲ್ಲೆಗಳಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಛೇರಿಗಳು ಕಾರ್ಯನಿರ್ವಹಿಸುತ್ತಿದೆ. ಈ ಕಛೇರಿಗಳಲ್ಲಿ ಕರ್ನಾಟಕ ಸರ್ಕಾರ ಮತ್ತು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಹಮ್ಮಿಕೊಂಡಿರುವ ಯೋಜನೆಗಳನ್ನು ಅಳವಡಿಸಲು ಮತ್ತು ಅಲ್ಪಸಂಖ್ಯಾತರ ಅಭಿವೃದ್ದಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಕಾರ್ಯವನ್ನು ನಿರ್ವಹಿಸುತ್ತಿದೆ. ಪ್ರತಿ ಜಿಲ್ಲೆಯ ಅಲ್ಪಸಂಖ್ಯಾತರ ಕಛೇರಿಯಲ್ಲಿ 6 ರಿಂದ 13 ಜನ ಅಧಿಕಾರಿ/ಸಿಬ್ಬಂದಿಗಳ ಮಂಜೂರಾತಿ ನೀಡಲಾಗಿದೆ.ಅಲ್ಪಸಂಖ್ಯಾತರ ನಿರ್ದೇಶನಾಲಯದಡಿ ಸುಮಾರು 5851 ಹುದ್ದೆಗಳನ್ನು ಸೃಜಿಸಿ ಅಲ್ಪಸಂಖ್ಯಾತರ ವಸತಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಬಲಪಡಿಸುವ ಮತ್ತು ನಿರ್ದೇಶನಾಲಯ ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಕಛೇರಿಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸುಮೂರು 1952 ಬಿ ಮತ್ತು ಸಿ ಬೋಧಕ/ಬೋಧಕೇತರ ಹುದ್ದೆಗಳನ್ನು ತುಂಬಲಾಗಿದೆ. ಈ ಪೈಕಿ ಸುಮಾರು 605 ಹುದ್ದೆಗಳು 371(ಜೆ) ಅನ್ವಯ ಹೈದರಾಬಾದ್-ಕರ್ನಾಟಕ ಪ್ರದೇಶ ವೃಂದಕ್ಕೆ ಸೇರಿರುತ್ತವೆ.
2017-18ನೇ ಸಾಲಿಗೆ ಅಧಿಕಾರಿಗಳು/ಸಿಬ್ಬಂದಿ ವೇತನ, ಕಛೇರಿಯ ಇತರೆ ವೆಚ್ಚಗಳಿಗೆ ರೂ. 1436.00 ಲಕ್ಷ ಆಯವ್ಯಯವನ್ನು ಒದಗಿಸಿದ್ದು, ರೂ.1436.00ಲಕ್ಷ ಬಿಡುಗಡೆ ಮಾಡಲಾಗಿದೆ. ಮಾರ್ಚ್-2018ರ ಅಂತ್ಯಕ್ಕೆ ರೂ. 1464.95 ಲಕ್ಷ ವೆಚ್ಚ ಮಾಡಲಾಗಿದೆ. ಜೈನ, ಬೌದ್ದ ಮತ್ತು ಸಿಖ್ ಸಮುದಾಯದ ಅಭಿವೃದ್ದಿ ಯೋಜನೆಯಿಂದ ರೂ.30.00 ಲಕ್ಷಗಳನ್ನು ಕಚೇರಿ ಇತರೆ ವೆಚ್ಚಕ್ಕೆ ಪುನರ್‍ವಿನಿಯೋಗಿಸಿ ಕೊಳ್ಳಲಾಗಿದೆ.

ವೆಬ್‍ಸೈಟ್‍ನಲ್ಲಿರುವ ವಿಷಯದ ಸ್ವಾಮ್ಯ ಮತ್ತು ನಿರ್ವಹಣೆಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಬೆಂಗಳೂರು ರವರಿಂದ ಪರಿಷ್ಕರಿಸಲಾಗಿದೆ.
ನ್ಯಾಷನಲ್ ಇನ್‍ಪಾಮ್ರ್ಯಾಟಿಕ್ಸ್ ಸೆಂಟರ್ (ಎನ್.ಐ.ಸಿ)ನಿಂದ ವಿನ್ಯಾಸಗೊಳಿಸಿ, ಅಭಿವೃದ್ದಿಗೊಳಿಸಿ ಹೋಸ್ಟ್ ಮಾಡಲಾಗಿದೆ.
ಈ ಸೈಟ್‍ನಲ್ಲಿರುವ ವಿಷಯದ ಬಗ್ಗೆ ತಮ್ಮ ಆಕ್ಷೇಪಣೆ ಮತ್ತು ಅಭಿಪ್ರಾಯಗಳನ್ನು ಇಲಾಖೆಯ ಇ-ಮೇಲ್:-gokdom[at]gmail[dot]com ಗೆ ಕಳುಹಿಸಬಹುದಾಗಿದೆ.
ಕೊನೆಯ ನವೀಕರಣ: 05/07/2019